ಅಭಿಪ್ರಾಯ / ಸಲಹೆಗಳು

ಪಾಲ್ಗೊಳ್ಳುವಿಕೆ

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಇರುವಂತೆ , ಕರ್ನಾಟಕ ಸರ್ಕಾರವು ಸಮುದಾಯದ ಭಾಗವಹಿಸುವಿಕೆಯನ್ನು ಪ್ರೋತ್ಸಾಹಿಸುವುದು ಸಿಸ್ಲೆಪ್ ಸಂಸ್ಥೆಯ ಕಾರ್ಯ ಚಟುವಟಿಕೆಗಳಲ್ಲಿ ಒಂದಾಗಿದೆ.

 

ಸಿಸ್ಲೆಪ್ ಸಂಸ್ಥೆಯು ಕೆಳಗಿನ ಭಾಗೀದಾರರನ್ನು ಒಳಗೊಂಡಿದೆ.

ಶಿಕ್ಷಣ ಇಲಾಖೆ :

  • ರಾಜ್ಯ/ಜಿಲ್ಲೆ/ಬ್ಲಾಕ್/ಕ್ಲಸ್ಟರ್ ಹಂತದ ಅಧಿಕಾರಿಗಳು
  • ಶಾಲೆಗಳು
  • ಪಂಚಾಯತಿಗಳು
  • ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ
  • ಮುಖ್ಯಶಿಕ್ಷಕರು
  • ಶಿಕ್ಷಕರು
  • ಪಾಲಕರು/ಪೋಷಕರು
  • ವಿದ್ಯಾರ್ಥಿಗಳು

ಶಿಕ್ಷಣ ತಜ್ಞರು :

  • ಶೈಕ್ಷಣಿಕ ಸುಧಾರಣಾ ಕಾರ್ಯಗಳಲ್ಲಿ ತೊಡಗಿಸಿಕೊಂಡ ಸಮಾಜ ಸೇವಕರು,ಶೈಕ್ಷಣಿಕ ಮನೋವಿಜ್ಞಾನಿಗಳು ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು.

 

ಸಹಭಾಗಿತ್ವ :

 

ಸರ್ಕಾರವು ಸಿಸ್ಲೆಪ್ ಸಂಸ್ಥೆಯನ್ನು ಸ್ವಾಯತ್ತ ಸಂಸ್ಥೆಯನ್ನಾಗಿ ರಚಿಸಿದೆ.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಕ್ಷೇತ್ರದಲ್ಲಿ ಸರ್ಕಾರದ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಪರಿಣಿತಿ ಹೊಂದಿರುವ ಸಂಘ ಸಂಸ್ಥೆಗಳು ಸಿಸ್ಲೆಪ್ ಸಂಸ್ಥೆಗೆ ಸಹಕಾರ ನೀಡುವುದನ್ನು ಸರ್ಕಾರವು ಬಯಸುತ್ತದೆ.ಇಂತಹ ಸಂಘ ಸಂಸ್ಥೆಗಲಳು ಸರ್ಕಾರದ ಒಡಂಬಡಿಕೆಯೊಂದಿಗೆ ಸಿಸ್ಲೆಪ್ ಸಂಸ್ಥೆಯ ಗುರಿ ಉದ್ದೇಶಗಳನ್ನು ಸಾಧಿಸಲು ಸಹಕಾರ ನೀಡಬಹುದಾಗಿದೆ.

        ಸಿಸ್ಲೆಪ್ ಸಂಸ್ಥೆಯ ಒಡಂಬಡಿಕೆಯೊಂದಿಗೆ ಶೈಕ್ಷಣಿಕ ನಿರ್ವಹಣೆ ಅಥವಾ ಸಾಮಾನ್ಯ ನಿರ್ವಹಣೆ ಅಥವಾ ಶೈಕ್ಷಣಿಕ ಸಂಶೋಧನೆಗಾಗಿ ಸಾಮಾಜಿಕ ಮತ್ತು ಆರ್ಥಿಕ ಸಂಸ್ಥೆಗಳಾದ, ಐ.ಸಿ.ಇ.ಎಸ್.ಬೆಂಗಳೂರು, ಇಂಡಿಯನ್ ಇನ್ಸಿಟ್ಯೂಟ್ ಆಫ್. ಮ್ಯಾನೇಜ್ಮೆಂಟ್,.ಐ.ಐ.ಎಮ್. ಬೆಂಗಳೂರು .ಸಿ.ಎಮ್.ಡಿ.ಆರ್.ಧಾರವಾಡ. ಕೌಸಾಳಿ. ಇನ್ಸಿಟ್ಯೂಟ್ ಆಫ್. ಮ್ಯಾನೇಜ್ಮೆಂಟ್ ಧಾರವಾಡ. ವಿಶ್ವೇಶ್ವರಯ್ಯ ಟೆಕ್ನಾಲಜಿ ಯುನಿರ್ವಸಿಟಿ. ಎನ್.ಆಯ್.ಎ.ಎಸ್.ಬೆಂಗಳೂರು. ದಿ ಸ್ಕೂಲ್  ಮ್ಯಾನೇಜಮೆಂಟ್ ಬೆಂಗಳೂರು. ಐ.ಐ.ಎಸ್.ಸಿ.  ಬೆಂಗಳೂರು. ದಿ ಕೆನರಾ ಬ್ಯಾಂಕ್  ಮ್ಯಾನೇಜ್ ಮೆಂಟ್ ಸ್ಕೂಲ್ ಸಿ.ಎಲ್.ಹೆಚ್.ಆರ್.ಡಿ. ಮಂಗಳೂರು. ರೀಜನಲ್ ಇನ್ಸಿಟ್ಯೂಟ್ ಆಫ್.ಮೈಸೂರು, ಸಂಸ್ಥೆಗಳ ಸಹಭಾಗಿತ್ವವನ್ನು ಪಡೆದುಕೊಳ್ಳುವುದು.

 

ಹಣಕಾಸು;-

 

                    ಸಿಸ್ಲೆಪ್ ಸಂಸ್ಥೆಯು ಕರ್ನಾಟಕ ಸೊಸೈಟಿ ಕಾಯ್ದೆಯ ಅಡಿಯಲ್ಲಿ ನೊಂದಣಿಯಾಗಿರುವ ಸಂಸ್ಥೆಯಾಗಿದೆ. ಆಡಳಿತ ಮಂಡಳಿ ಹಾಗೂ ಕಾರ್ಯನಿರ್ವಾಹಕ ಮಂಡಳಿಗಳ ಮಾರ್ಗದರ್ಶನದೊಂದಿಗೆ ಸಂಸ್ಥೆಯ ಕಾರ್ಯ ಚಟುವಟಿಕೆಗಳು ಅನುಷ್ಠಾನಗೊಳ್ಳುತ್ತವೆ. 2010-2011 ನೇ ಸಾಲಿನಲ್ಲಿ ಸಿಸ್ಲೆಪ್ ಸಂಸ್ಥೆಯನ್ನು ಪ್ರಾರಂಭಿಸಲಾಯಿತು. 2010-2011 ರಲ್ಲಿ ರಾಜ್ಯಸರ್ಕಾರವು 25-00 ಲಕ್ಷ, ಹಾಗೂ 2011-12 ನೇ ಸಾಲಿನಲ್ಲಿ ರೂ.125-00 ಲಕ್ಷಗಳನ್ನು ಒದಗಿಸಿದೆ. ಮಾನವ ಸಂಪನ್ಮೂಲ ಅಭಿವೃಧ್ಧಿ ಸಚಿವಾಲಯವು ಒಂದು ಬಾರಿ ರೂ.300-00 ಲಕ್ಷ ಅನುದಾನವನ್ನು ಬಿಡುಗಡೆಗೊಳಿಸಿರುತ್ತದೆ. ಸಂಸ್ಥೆಯ ವಾರ್ಷಿಕ ನಿರ್ವಹಣೆಗೆ ಅಗತ್ಯವಾದ ಅನುದಾನವನ್ನು ರಾಜ್ಯ ಸರ್ಕಾರವು ಬಿಡುಗಡೆಗೊಳಿಸುತ್ತದೆ.

ಇತ್ತೀಚಿನ ನವೀಕರಣ​ : 12-10-2020 04:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ರಾಜ್ಯ ಸಂಸ್ಥೆ ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080