ಅಭಿಪ್ರಾಯ / ಸಲಹೆಗಳು

ಉದ್ದೇಶಗಳು

ಶಿಕ್ಷಣದ ನಿರ್ವಹಣೆಯನ್ನು ನಿಧಾನವಾಗಿ ಮತ್ತು ಸ್ಥಿರವಾಗಿ ಸರ್ಕಾರದ ನಿಯಂತ್ರಣದಿಂದ ಸಮರ್ಥ ಸಮುದಾಯಕ್ಕೆ ವರ್ಗಾಯಿಸುವುದು ಈ ಸಂಸ್ತೆಯ ಪ್ರಮುಖ ಗುರಿ. ಈ ಗುರಿ ಸಾಧನೆಗೆ ಶಿಕ್ಷಣ ಕ್ಷೇತ್ರಕ್ಕೆ ಸಂಬಂದಿಸಿದ ಎಲ್ಲ ಭಾಗೀದಾರರ ದೃಷ್ಟಿಕೋನ ಮತ್ತು ಮನೋಭಾವದಲ್ಲಿ ಬದಲಾವಣೆ ಅತ್ಯಗತ್ಯ.

 

ಇದಕ್ಕಾಗಿ ಶಾಲಾ ಶಿಕ್ಷಕರಿಂದ ಹಿಡಿದು ಕ್ಲಸ್ಟರ್, ಬ್ಲಾಕ್ ಜಿಲ್ಲೆ ಹಾಗೂ ರಾಜ್ಯ ಮಟ್ಟದವರೆಗಿನ ಶಿಕ್ಷಣಾಧಿಕಾರಿಗಳು, ಸಮುದಾಯದ ನಾಯಕರು, ಹಾಗೂ ಪಂಚಾಯತಿಗಳ ಸಾಮರ್ಥ್ಯ ಅಭಿವೃದ್ದಿ ಮಾಡುವುದು; ಯೋಜನೆ ಮತ್ತು ನಿರ್ವಹಣೆಗೆ ಸಂಬಂದಿಸಿದಂತೆ ಸರ್ಕಾರಕ್ಕೆ ಅಗತ್ಯವಾದ ತಜ್ಞರ ನೆರವು ಒದಗಿಸುವುದು ಹಾಗೂ ಸಮರ್ಥವಾಗಿ ಶೈಕ್ಷಣಿಕ ವಿಕೇಂದ್ರಿಕರಣವನ್ನು ಅನುಷ್ಟಾನಗೊಳಿಸುವುದು ಸಿಸ್ ಲಿಪ್ ಪ್ರಾಥಮಿಕ ಜವಾಬ್ದಾರಿ.

 

ಈ ಜವಾಬ್ದಾರಿ ನಿರ್ವಹಣೆಯ ಹಿನ್ನೆಲೆಯಲ್ಲ ಸಿಸ್ ಲಿಪ್ ಉದ್ದೇಶಗಳನ್ನು ರೂಪಿಸಲಾಗಿದೆ.

  1. ಶಿಕ್ಷಣ ನೀತಿ: ಸಂಶೋಧನೆ ಮತ್ತು ಕ್ರಿಯಾತ್ಮಕ ಸಂಶೋಧನೆಗಳ ಫಲಿತಾಂಶವನ್ನು ಆಧರಿಸಿ ಶಿಕ್ಷಣ ನೀತಿ ರೂಪಿಸಲು ಹಾಗೂ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣೆ ಮಾಡಲು ರಾಜ್ಯ ಸರ್ಕಾರಕ್ಕೆ ಪರಿಣತ ನೆರವು ನೀಡುವುದು.
  2. ಸಾಂಸ್ಥಿಕ ವಿನ್ಯಾಸ ಮತ್ತು ಶೈಕ್ಷಣಿಕ ಪ್ರಕ್ರಿಯೆ: ಈಗಿರುವ ಶೈಕ್ಷಣಿಕ ವ್ಯವಸ್ಥೆ ಮತ್ತು ಪ್ರಕ್ರಿಯೆಗಳನ್ನು ಅಧ್ಯಯನ ಮಾಡಿ, ಶಿಕ್ಷಣದ ಉದ್ದೇಶ ಈಡೇರಿಕೆಗೆ ಇವುಗಳಲ್ಲಿ ಅಗತ್ಯ ಬದಲಾವಣೆಗಳನ್ನು ಸೂಚಿಸುವುದು.
  3. ಮಾನವ ಸಂಪನ್ಮೂಲ ಅಭಿವೃದ್ದಿ ಮತ್ತು ಪ್ರಕ್ರಿಯೆಗಳು: ಶಾಲೆಯಿಂದ ರಾಜ್ಯ ಮಟ್ಟದವರೆಗೆ ಶಿಕ್ಷಣ ವ್ಯವಸ್ಥೆಯಲ್ಲಿರುವ ಎಲ್ಲಾ ಭಾಗೀದಾರರಿಗೂ ನಾಯಕತ್ವ, ನಿರ್ವಹಣೆ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಸಾಮರ್ಥ್ಯಾಭಿವೃದ್ದಿ ಮಾಡುವುದು. ಎಸ್.ಡಿ.ಎಂ.ಸಿ., ಸದಸ್ಯರು, ಪಂಚಾಯತಿ ಸದಸ್ಯರು ಮತ್ತು ಸಮುದಾಯದ ಇತರರಿಗೆ ತಳಮಟ್ಟದ ಯೋಜನೆ, ಸಹಭಾಗಿತ್ವ ಪ್ರಕ್ರಿಯೆ, ಶಾಲಾಭಿವೃದ್ದಿಯೋಜನೆ ಮೊದಲಾದ ವಿಷಯಗಳಲ್ಲಿ ಸಾಮರ್ಥ್ಯಾಭಿವೃದ್ದಿ ಮಾಡುವುದು: ಶೈಕ್ಷಣಿಕ ನಿರ್ವಾಹಕರಲ್ಲಿ ಸೇವಾ ಮನೋಭಾವ, ಉತ್ತಮ ಆಡಳಿತ, ಪಾರದರ್ಶಕತೆ ಹಾಗೂ ಹೊಣೆಗಾರಿಕೆ ಮೂಡಿಸಲು ಸೂಕ್ತವಾದ ವಿಧಾನಗಳನ್ನು ಶಿಫಾರಸ್ಸು ಮಾಡುವುದು.
  4. ಸಂಶೋಧನೆ ಮತ್ತು ಮೌಲ್ಯ ಮಾಪನ: ಶೈಕ್ಷಣಿಕ ನಿರ್ವಹಣೆ ಕ್ಷೇತ್ರವು ನಿರಂತರ ಅಧ್ಯಯನ ಬಯಸುವುದರಿಂದ ಸಂಶೋಧನೆಯು ಸಿಸ್ಲೆಪ್ನ ಪ್ರಾಥಮಿಕ ಕಾರ್ಯಗಳಲ್ಲಿ ಒಂದು. ಇಲಾಖೆಯು ಅನುಷ್ಠಾನಗೊಳಿಸುತ್ತಿರುವ ವಿಭಿನ್ನ ಕಾರ್ಯಕ್ರಮಗಳೂ ಸೇರಿದಂತೆ ಇಲಾಖೆಯ ಬೇರೆ ಬೇರೆ ಮಗ್ಗಲುಗಳನ್ನು ಕುರಿತು ಸಂಶೋಧನೆ ಕೈಗೊಳ್ಳುವುದು ಮತ್ತು ಮೌಲ್ಯಮಾಪನ ಮಾಡುವುದು.
  5. ಶಿಕ್ಷಣದ ಗುಣಮಟ್ಟ:ಶಿಕ್ಷಣ ಇಲಾಖೆಯು ತನ್ನೆಲ್ಲ ಕಾರ್ಯಕ್ರಮಗಳ ಮೂಲಕ ಗುಣಾತ್ಮಕ ಶಿಕ್ಷಣ ಮತ್ತು ಗುಣಾತ್ಮಕ ಆಡಳಿತ ನೀಡಲು ಗಮನಹರಿಸಬೇಕು. ಗುಣಮಟ್ಟ ಸುಧಾರಣೆಗೆ ಅಗತ್ಯವಾದ ಸಂಶೋಧನೆಗಳು ಮತ್ತು ತರಬೇತಿಗಳನ್ನು ಸಿಸ್ಲೆಪ್ ಹಮ್ಮಿಕೊಳ್ಳುವುದು
  6. ಹಣಕಾಸು:ಶೈಕ್ಷಣಿಕ ಯೋಜನೆಗಳ ವೆಚ್ಚ ನಿಗದಿಪಡಿಸುವುದು, ಸಂಪನ್ಮೂಲ ಕ್ರೊಢೀಕರಣ ಮತ್ತು ಬಳಕೆಗೆ ಸಂಬಂದಿಸಿದಂತೆ ಮಾರ್ಗದರ್ಶನ ಮಾಡುವುದು
  7. ತಂತ್ರಜ್ಞಾನ ಮತ್ತು ಜ್ಞಾನದ ನಿರ್ವಹಣೆ:ಇಲಾಖೆಗೆ ಬೇಕಾದ ಎಲ್ಲ ಮಾಹಿತಿಗಳನ್ನು ಇಲಾಖೆಯ ಆಂತರಿಕ ಮಾಹಿತಿ ಹಾಗೂ ಹೊರಗಿನ ಜ್ಞಾನ ಒದಗಿಸಿಕೊಡುವುದು ಮತ್ತು ಆಡಳಿತದಲ್ಲಿ ಪಾರದರ್ಶಕತೆ ತರುವುದು

ಪ್ರಮುಖ ಚಟುವಟಿಕೆಗಳು:

  • ಅಗತ್ಯಾನುಸಾರ ತರಬೇತಿ, ಸಂಕಿರಣ, ಸಂವಾದ ಕಾರ್ಯಾಗಾರ ಸಮ್ಮೇಳನಗಳನ್ನು ಏರ್ಪಡಿಸುವುದು.
  • ಕಾರ್ಯಕ್ರಮಗಳ ಉಸ್ತುವಾರಿ, ಮಾಹಿತಿ ಸಂಗ್ರಹಣೆ ವಿಶ್ಲೇಷಣೆ ಮತ್ತು ಸಮೀಕ್ಷೆ.
  • ಸಂಶೋಧನೆ ಮೌಲ್ಯಮಾಪನ ಮತ್ತು ಅಧ್ಯಯನ.
  • ದಾಖಲಾತಿ ವಿಸ್ತರಣೆ ಮತ್ತು ಮಾಹಿತಿ ವಿತರಣೆ.
  • ಮಾಹಿತಿ ತಂತ್ರಜ್ಞಾನ ಬಳಕೆಗೆ ಪ್ರೊತ್ಸಾಹ
  • ವೃತ್ತಿಪರ ಸಂಸ್ಥೆಗಳೊಂದಿಗೆ ಸಂಬಂಧ ಮತ್ತು ಸಂಪರ್ಕ

ಇತ್ತೀಚಿನ ನವೀಕರಣ​ : 05-09-2020 02:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ರಾಜ್ಯ ಸಂಸ್ಥೆ ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080