ಅಭಿಪ್ರಾಯ / ಸಲಹೆಗಳು

ಪರಿಕಲ್ಪನೆ ಟಿಪ್ಪಣಿ

1986ರ ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಇದರ ಅನುಷ್ಠಾನಕ್ಕಾಗಿ ಬಂದ 1992ರ ಕ್ರಿಯಾ ಯೋಜನೆ ಅನುಷ್ಠಾನ ವರದಿಗಳು ಶಿಕ್ಷಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದವು. ಹಾಗೂ ಈ ಸಮಸ್ಯೆಗಳ ಪರಿಹಾರಕ್ಕೆ ಈ ಕೆಳಗಿನ ಸಲಹೆಗಳನ್ನು ನೀಡಿದ್ದವು.

ಶೈಕ್ಷಣಿಕ ಆಡಳಿತವನ್ನು ವಿಕೇಂದ್ರೀಕರಣಗೊಳಿಸುವುದು ಮತ್ತು ಎಲ್ಲ ಜನರ ಭಾಗವಹಿಸುವಿಕೆ; ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣೆ ವ್ಯವಸ್ಥೆಯ ಅಮೂಲಾಗ್ರ ಬದಲಾವಣೆ; ದೇಶದ ಅಭಿವೃದ್ದಿ ಅಗತ್ಯಗಳಿಗೆ ಅನುಸಾರವಾಗಿ ಶೈಕ್ಷಣಿಕ ದೃಷ್ಟಿಕೋನವನ್ನು ರೂಪಿಸುವುದು ಹಾಗೂ ಧೀರ್ಘಕಾಲೀನ ಶೈಕ್ಷಣಿಕ ಯೋಜನೆಗಳನ್ನು ಹಮ್ಮಿಕೊಳ್ಳುವುದು; ಶಿಕ್ಷಣಕ್ಕೆ ಸಂಬಂಧಿಸಿದ ಸರ್ಕಾರಿ ಮತ್ತು ಸರ್ಕಾರೇತರ ಸಂಸ್ಥೆಗಳ ನಡುವೆ ಸಂಪರ್ಕ ಜಾಲ ನಿರ್ಮಿಸುವುದು; ಶೈಕ್ಷಣಿಕ ಸಂಸ್ಥೆಗಳ ಮುಖ್ಯಸ್ಥರು, ಶಿಕ್ಷಣ ಯೋಜಕರು ಹಾಗೂ ಆಡಳಿತಗಾರರಲ್ಲಿ ನಾಯಕತ್ವ ಕೌಶಲ ಮತ್ತು ನಿರ್ವಹಣೆ ಸಾಮರ್ಥ್ಯಗಳನ್ನು ಬೆಳೆಸುವುದು.

ಈ ದಾಖಲೆಗಳ ನೀತಿ ನಿರ್ದೇಶನದ ಅನುಸಾರ ಶೈಕ್ಷಣಿಕ ಆಡಳಿತಗಾರರ ಸಾಮರ್ಥ್ಯ ಅಭಿವೃದ್ದಿ ಸಂಸ್ಥೆ’(SIEMAT-ಸಿಮ್ಯಾಟ್) ಸ್ಥಾಪಿಸಲು ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯವು 90ರ ದಶಕದಲ್ಲಿ ನಿರ್ಧರಿಸಿತು.

ಆರಂಭದಲ್ಲಿ “ಜಿಲ್ಲಾ ಪ್ರಾಥಮಿಕ ಶಿಕ್ಷಣ ಕಾರ್ಯಕ್ರಮ”(ಡಿ.ಪಿ.ಇ.ಪಿ) ಇದ್ದ ರಾಜ್ಯಗಳಿಗೆ ಮಾತ್ರ ಸೀಮಿತವಾಗಿದ್ದ ‘ಸೀಮ್ಯಾಟ್’ಗಳನ್ನು 2001-02ರಲ್ಲಿ ಸರ್ವ ಶಿಕ್ಷಣ ಅಭಿಯಾನದ ವ್ಯಾಪ್ತಿಗೆ ತಂದು, ದೇಶದ ಎಲ್ಲ ರಾಜ್ಯಗಳಲ್ಲಿ ಸ್ಥಾಪನೆ ಮಾಡಲು ನಿರ್ದೇಶಿಸಲಾಯಿತು.

ಕರ್ನಾಟಕವೂ ತನ್ನ ಅನುಭವಗಳು, ಕಲಿಕೆಗಳು ಹಾಗೂ ಅಧ್ಯಯನ ವರದಿಗಳ ಮೂಲಕ ಶೈಕ್ಷಣೀಕ ನಿರ್ವಹಣೆಯ ಅಗತ್ಯವನ್ನು ಕಂಡುಕೊಂಡಿತ್ತು. 2000ರಲ್ಲಿ ಮಾನ್ಯ ಮುಖ್ಯ ಮಂತ್ರಿಗಳ ಟಾಸ್ಕ್ ಪೋರ್ಸ್ ವರದಿ, 2000ದ ಆಡಳಿತ ಸುಧಾರಣೆ ಆಯೋಗದ ವರದಿ, 2002ರ ಶೈಕ್ಷಣಿಕ ದೃಷ್ಟಿಕೋನ ವರದಿಗಳೂ ಶೈಕ್ಷಣಿಕ ವಿಕೇಂದ್ರೀಕರಣ ಮತ್ತು ಅದಕ್ಕೆ ಬೇಕಾದ ಸಾಮರ್ಥ್ಯಾಭಿವೃದ್ದಿಯ ಅಗತ್ಯಗಳನ್ನು ಸ್ಪಷ್ಟವಾಗಿ ಗುರುತಿಸಿದ್ದವು. ಅಷ್ಟೇ ಅಲ್ಲ ಜಾಗತಿಕ ಮಟ್ಟದಲ್ಲಿ ಪ್ರಯೋಗಗಳ ಮೂಲಕ ಪರಿಣಾಮಕಾರಿ ಎಂದು ಸಾಬೀತಾಗಿದ್ದ ‘ಸ್ವಯಂ ಆಡಳಿತ ಶಾಲೆ’ಗಳ ಪರಿಕಲ್ಪನೆಯನ್ನು ಈ ವರದಿಗಳು ಬೆಂಬಲಿಸಿದ್ದವು.

2003ರಲ್ಲಿ ಶೈಕ್ಷಣಿಕ ಉತ್ಕೃಷ್ಟತೆ ಸಾಧಿಸಲು ನೀತಿ ನಿರೂಪಣೆಗೆ ಬೆಂಬಲ ಒದಗಿಸುವುದಕ್ಕೆ ಸಂಬಂಧಿಸಿದಂತೆ ಅಜೀಂ ಪ್ರೇಮ್ ಜಿ ಫೌಂಢೇಷನ್ ನೊಂದಿಗೆ ಒಡಂಬಡಿಕೆ ಮಾಡಿಕೊಂಡ ರಾಜ್ಯಸರ್ಕಾರ, ಶಿಕ್ಷಣ ಇಲಾಖೆಯಲ್ಲಿ ಪಾಲಿಸಿ ಪ್ಲಾನಿಂಗ್ ಘಟಕವನ್ನು ಸ್ಥಾಪಿಸಿತು. ಈ ಘಟಕವು ಶಿಕ್ಷಣ ಇಲಾಖೆಯ ಮರುವಿನ್ಯಾಸ ಕುರಿತಂತೆ ವ್ಯಾಪಕ ಅಧ್ಯಯನವನ್ನು(ಪ್ರೈಸ್ ವಾಟರ್ ಹೌಸ್ ಕೂಪರ್ ಸಂಸ್ಥೆ ಮೂಲಕ) ಹಮ್ಮಿಕೊಂಡಿತು. ಶೈಕ್ಷಣಿಕ ವಿಕೇಂದ್ರಿಕರಣಕ್ಕೆ ಪೂರಕವಾದ ಶಿಫಾರಸ್ಸುಗಳನ್ನು ಮಾಡಿತು.

2008ರಲ್ಲಿ ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ, 2010ರಲ್ಲಿ 'ರಾಜ್ಯ ಶಾಲಾ ನಾಯಕತ್ವ, ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣೆ ಸಂಸ್ಥೆ’ ಯನ್ನು(ಸಿಸ್ಲೆಪ್-SISLEP) ಸ್ಥಾಪಿಸಲಾಯಿತು. 2011ರಲ್ಲಿ ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮದಡಿಯಲ್ಲಿ ನೋಂದಾಯಿಸಲಾಯಿತು. ಆನಂತರದಿಂದ ಪಾಲಿಸಿ ಪ್ಲಾನಿಂಗ್ ಘಟಕವು ಸಿಸ್ಲೆಪ್ ನಲ್ಲಿ ಕಾರ್ಯನಿರ್ವಹಿಸುತ್ತಿದೆ.

 

SISLEP Brouchure for download(in Kannada)

ಇತ್ತೀಚಿನ ನವೀಕರಣ​ : 05-09-2020 02:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಶಾಲಾ ನಾಯಕತ್ವ ಶೈಕ್ಷಣಿಕ ಯೋಜನೆ ಮತ್ತು ನಿರ್ವಹಣಾ ರಾಜ್ಯ ಸಂಸ್ಥೆ ಧಾರವಾಡ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080